ಉಡುಪಿ ಜಿಲ್ಲಾಧಿಕಾರಿಯವರಿಂದ ಪ್ರವಾಸೋದ್ಯಮ ಇಲಾಖೆಯ ಕಾಮಗಾರಿ ವೀಕ್ಷಣೆ: ಸೋಮೇಶ್ವರ ದೇವಸ್ಥಾನ ರಸ್ತೆ ಸಮಸ್ಯೆ ಬಗೆಹರಿಸಲು ಉಡುಪಿ ಡಿಸಿ ಸ್ವರೂಪ ರವರು ಸೂಚನೆ

dc visit

rajesh_k by: Rajesh K

ಬೈಂದೂರು:ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಸೋಮೇಶ್ವರ ಕಡಲ ತೀರದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಲು ಬಂದ ಮಾನ್ಯ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ರವರು ಕಾಮಗಾರಿಯ ವೀಕ್ಷಣೆಯ ನಂತರ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿಕೊಟ್ಟು ದೇವರ ದರ್ಶನ ಪಡೆದರು.

ಈ ನಡುವೆ ಸಾರ್ವಜನಿಕರ ಹಾಗೂ ಸೋಮೇಶ್ವರನ ಭಕ್ತರ ಬಹುದಿನದ ಕನಸಾದ ಸೋಮೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ಪ್ರವಾಸೋದ್ಯಮ ಇಲಾಖೆಯವರು ಕಾಂಕ್ರೀಟ್ ರೋಡ್ ಮಾಡಿಕೊಡುವುದಾಗಿ ತೆಗೆದು ಹಾಕಿದ್ದು ಎಂಟು ತಿಂಗಳಿನಿಂದ ರಸ್ತೆ ಮಾಡಿಕೊಡದೆ, ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಹಾಗೂ ಮುಂದಿನ ತಿಂಗಳು ನಡೆಯುವ ದೇವಸ್ಥಾನ ಉತ್ಸವಕ್ಕೆ ಇದರಿಂದ ತೊಡಕ್ಕಾಗಲಿದ್ದು ಉತ್ಸವದ ಒಳಗಾಗಿ ರಸ್ತೆಯನ್ನು ಸರಿಪಡಿಸಿ ಕೊಡುವಂತೆ ಸಾರ್ವಜನಿಕರು ಇಟ್ಟ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಅತಿ ಶೀಘ್ರದಲ್ಲಿ ರಸ್ತೆಯ ಪುನರ್ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿರುತ್ತಾರೆ.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಪಟ್ಟ ಅಭಿಯಂತರರು,ಗೌರವಾನ್ವಿತ ತಹಶೀಲ್ದಾರರು,, ಪಟ್ಟಣ ಪಂಚಾಯತ್ ಅಧಿಕಾರಿಗಳು, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *